Poem: ಅಳಿಯಲಾರದ ನೆನಹು

I recently bought a copy of Gopalakrishna Adiga’s Poems. This is a “Samagra” or all his poems in one volume.

IMG_2514

Sometimes all you need on a bad evening is to read one poem, put your tongue through the words he comes up with and let your brain decipher the Sandhis.

After a stressful day today, I came across this one on memories. This post is to share that one poem.

ಅಳಿಯಲಾರದ ನೆನಹು ಜೀವಜೀವಾಳದಲಿ ಬಲವಾಗಿ ಬೇರೂರಿ ನಿಂದು
ಗಳಿಗೆಗಳಿಗೆಗೆ ಬಾಳುವೆಯ ದಾರಿಯನು ತಡೆದು ಸೆಳೆದಪುದು ಭೂತ ದೆಡೆಗಿಂದು.

ಕಳೆದ ಬಾಳುವೆಯ ನಲ್ಗನಸಿದೋ ಜೀವನದ ಹೊಳೆಯ ಮೊದಲಿಂ ತುದಿಯ ವರೆಗೂ
ಅಲೆಯಾಗಿ, ಸುಳಿಯಾಗಿ, ಸುಳಿವ ಮೆಲ್ಲೆಲರಾಗಿ ಬಳಸಿಹುದು ಬಹುರೂಹುವಡೆದು

ಭಾವವೀಣೆಯ ತಂತಿಯನು ಮೀಟಿದೊಡೆ ಕಳೆದ ಜೀವನವೇ ಬಹುರಾಗಗೊಂಡು
ತೀವಿ ಹರಿಯುವುದು, ಮನವನಳಲಿಪುದು, ನಲಿಯಿಪುದು ಆವುದೋ ನವರಸದಿ ನಾದು.

ಸುಖ ದುಖಗಳ ರಾಗಭೋಗಗಳ ನೇಹಗಳ ಸಕಲಾನುಭಾವಗಳು ಕರಗಿ,
ಕರಗಿ ಸಮರಸವಾಗಿ ಬಂದೆದೆಯ ಕಂದರದಿ ಮೊರೆಯುತಿಹುದೊಂದೆ ತಾನದಲಿ.

ಎನಿತೆನಿತೊ ಹಗಲಿರುಳು ಸಮೆದ ಕಿರುದಾರಿಯಲಿ ನೆನಹೆಂಬ ಕಿರುಸೊಡರ ಹಿಡಿದು,
ಮನದ ಮಂದಿರಕಳಿದ ಬಾಳುವೆಯ ಚಿರವಿನೂತನ ಚಿತ್ರಗಳು ಧೀಂಕಿಡುವುವು.

ಸಂಜೆಯಾಗಸದ ನವರಾಗರಂಜಿತಮೇಘ ಪುಂಜದಂತಿವು ಚಣಕೆ ಚಣಕೆ
ಒಂದೊಂದು ರೂಪದಲಿ, ಒಂದೊಂದು ರಾಗದಲಿ, ಬಂದು ಸೊಂಕುವುದೆದೆಯ ತಳಕೆ.

ಮುಂದುಮುಂದಕೆ ಹಾರಲಾರದೆನ್ನೆದೆದುಂಬಿ ಹಿಂದುಹಿಂದಕೆ ಹಾರುತಿಹುದು;
ಹಿಂದಿನರಿವಿನ ಬಾಡಿಬಿದ್ದ ಹೂವಿನ ಕೆಲದಿ ನಿಂದು ನಿರುಕಿಸಿ ಚೀರುತಿಹುದು.

ಎಳಹರೆಯವೆಂಬ ಸಂತಸದ ಹೊನಲಡುಗುತಿರೆ ಅಳಿಜವ್ವನದ ಮರುವಿನೊಳಗೆ,
ಕಳೆಯುಡುಗಿ ಹಡಿಲಾಗಿ ಬಗೆ ಅಳಲ ಮಡಿಲಾಗಿ ತಳರುತಿದೆ ಮ್ರತ್ಯುವಿನ ತಡಿಗೆ.

With verses like this:
ಮುಂದುಮುಂದಕೆ ಹಾರಲಾರದೆನ್ನೆದೆದುಂಬಿ ಹಿಂದುಹಿಂದಕೆ ಹಾರುತಿಹುದು;
ಹಿಂದಿನರಿವಿನ ಬಾಡಿಬಿದ್ದ ಹೂವಿನ ಕೆಲದಿ ನಿಂದು ನಿರುಕಿಸಿ ಚೀರುತಿಹುದು.

Sigh.

Advertisements

5 thoughts on “Poem: ಅಳಿಯಲಾರದ ನೆನಹು

    1. Not able to find one online. And am not going to attempt it anytime soon. Won’t be able to do a good job and will take a lot of time to get it right. Sorry. Will update if I can find something good online.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s